Events
Upcoming Events
ದಿನಾಂಕ 09-04-2026 ರಂದು ಮಧ್ಯಾಹ್ನ ಗಂಟೆ 03:00 ಕ್ಕೆ ಶಿರೂರು ಪೇಟೆಯಿಂದ ವಿಶೇಷ ಆಕರ್ಷಣೆಗಳೊಂದಿಗೆ ಸಾನಿಧ್ಯಕ್ಕೆ ಹೊರೆಕಾಣಿಕೆ ಸಮರ್ಪಣೆಯ ಶೋಭಾಯಾತ್ರೆ ನಡೆಯಲಿದೆ.

ದಿನಾಂಕ 11-04-2026 ರ ಬೆಳಿಗ್ಗೆ ಗಂಟೆ 09-00 ಕ್ಕೆ ಭಜನಾ ಸಂಕೀರ್ತನೆ ಉದ್ಘಾಟನೆಗೊಂಡು 14-04-2026 ರ ಪರ್ಯಂತ ಸಂಪನ್ನಗೊಳ್ಳಲಿದೆ.

ದಿನಾಂಕ 11-04-2026 ರಿಂದ 14-04-2026 ಪರ್ಯಂತ ಪ್ರತಿನಿತ್ಯದ ಬೆಳಗ್ಗಿನ ಸಭಾ ಕಾರ್ಯಕ್ರಮಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ದಿನಾಂಕ 12-04-2026 ರಿಂದ 14-04-2026 ರ ಪರ್ಯಂತ ಪ್ರತಿನಿತ್ಯದ ಸಂಜೆಯ ಸಭಾ ಕಾರ್ಯಕ್ರಮಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ದಿನಾಂಕ 11-04-2026 ರಿಂದ 14-04-2026 ರ ಪರ್ಯಂತ ಪ್ರತಿನಿತ್ಯ ಮಧ್ಯಾಹ್ನ ಹಾಗೂ ರಾತ್ರಿ ಪ್ರಸಾದ ಭೋಜನ ನಡೆಯಲಿದೆ.


ದಿನಾಂಕ 12-04-2026 ರಂದು ಶಿಖರ ಕಲಶ ಪ್ರತಿಷ್ಠೆ, ಪ್ರಾಣಾದಿ ಆವಾಹನೆ, ಶಕ್ತಿ – ತತ್ವ – ಕಲಾಭಿವೃದ್ಧಿ ಹವನ ಮುಂತಾದ ಧಾರ್ಮಿಕ ಕಲಾಪಗಳು ನಡೆಯಲಿವೆ. ಅದೇ ದಿನ ಸಂಜೆ ಬ್ರಹ್ಮ ಕಲಶ ಸ್ನಪನಾಧಿವಾಸ, ನಿರೀಕ್ಷಾ ಪೂಜೆ ಹಾಗೂ ಬಲಿ ಮುಂತಾದ ಧಾರ್ಮಿಕ ಕಲಾಪಗಳು ಜರುಗಲಿವೆ.

ದಿನಾಂಕ 13-04-2026 ಸೋಮವಾರದಂದು ‘ಗಣಪತಿ ಪೂಜೆ’, ‘ಪುಣ್ಯಾಹ’, ‘ಸ್ನಪನಾಧಿವಾಸ ಹವನ’, ‘ಪ್ರತಿಷ್ಠಾಂಗ ಶಾಂತಿ’, ‘ಪ್ರಾಯಶ್ಚಿತ್ತಾದಿ ಅವಶಿಷ್ಟ ಹವನ’, ಲೋಕಕಲ್ಯಾಣ ಹಾಗೂ ಮಹಾಗಣಪತಿ ಪ್ರೀತ್ಯರ್ಥವಾಗಿ ‘ಅಷ್ಟದ್ರವ್ಯ ಮಹಾಗಣಪತಿ ಯಾಗ’ ಹಾಗೂ ‘ಮಹಾಪೂಜೆ’ ಮುಂತಾದ ಧಾರ್ಮಿಕ ಕಲಾಪಗಳು ನಡೆಯಲಿವೆ. ಇದೇ ದಿನ ಬೆಳಿಗ್ಗೆ ಗಂಟೆ 09:55 ಕ್ಕೆ ಒದಗಿಬರುವ ವೃಷಭ ಲಗ್ನ ಸುಮುಹೂರ್ತದಲ್ಲಿ ಬ್ರಹ್ಮ ಕಲಾಶಾಭಿಷೇಕ ಕಾರ್ಯಕ್ರಮವು ಜರುಗಲಿದೆ.
Gallery
Precious Moments Captured
A glimpse into the divine beauty and sacred traditions of Sri Mahaganapathi Temple. Each moment captured reflects devotion, heritage, and the spiritual essence that continues to inspire countless devotees.












